ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿ ಸ್ಪರ್ಧೆಗಳಿಗೆ ಆಯ್ಕೆಯಾದ ಕ್ರೀಡಾ ಪಟುಗಳ ONLINE ನೊಂದಣಿ - 2026 (V.1)
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿ ಸ್ಪರ್ಧೆಗಳಿಗೆ ಆಯ್ಕೆಯಾದ ಕ್ರೀಡಾ ಪಟುಗಳ ONLINE ನೊಂದಣಿ - 2026 (V.1)
:: ಷರತ್ತುಗಳು ::
1. ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ವೈಯಕ್ತಿಕ ಸ್ಪರ್ಧೆಗಳಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನಗಳಿಸಿದವರು ಮತ್ತು ಗುಂಪು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಗಳಿಸಿದಂತಹ ಕ್ರೀಡಾಪಟುಗಳು/ ಆಯ್ಕೆಯಾಗಿರುವ ಕ್ರೀಡಾಪಟುಗಳು ಮಾತ್ರ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.
2. ಸುಳ್ಳು ಮಾಹಿತಿ ನೀಡಿ ಕ್ರೀಡಾಕೂಟದಲ್ಲಿ ನೋಂದಣಿ ಮಾಡಿಕೊಂಡಲ್ಲಿ, ಸದರಿ ನೌಕರರ ವಿರುದ್ಧ ಸರ್ಕಾರ ಶಿಸ್ತು ಕ್ರಮ ಕೈಗೊಳ್ಳಲಿದೆ.
3. Online ಮೂಲಕ ನೊಂದಣಿಯಾಗದೇ ನೇರವಾಗಿ ಸರ್ಕಾರಿ ನೌಕರರು ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ ಹಾಗೂ ಕ್ರೀಡಾಕೂಟದ ಸ್ಥಳದಲ್ಲಿ ಅನಗತ್ಯ ಗೊಂದಲವನ್ನು ಉಂಟುಮಾಡಿದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮಜರುಗಿಸಲಾಗುವುದು.
4. Online ನಲ್ಲಿ ನೋಂದಣಿ ಮಾಡಿದ ಕ್ರೀಡಾಪಟುಗಳಿಗೆ ಕೇಂದ್ರ ಸಂಘ ಹಾಗೂ ಇಲಾಖಾ ವತಿಯಿಂದ ನೋಂದಣಿ ಕಾರ್ಡ್‌ಗಳನ್ನು ಕ್ರೀಡಾಕೂಟದ ಸ್ಥಳದಲ್ಲಿಯೇ ವಿತರಿಸಲಾಗುವುದು.
5. ನೋಂದಣಿ ಕಾರ್ಡ್ ಹಾಗೂ ಟ್ರಾಕ್‌ಸೂಟ್–ಕ್ಯಾಪ್ ಪಡೆಯುವ ಸಂದರ್ಭದಲ್ಲಿ ಕ್ರೀಡಾಪಟುಗಳು ಕಡ್ಡಾಯವಾಗಿ ತಮ್ಮ ಕಛೇರಿಯ/ ಇಲಾಖೆಯ ಗುರುತಿನ ಚೀಟಿಯನ್ನು ಪರಿಶೀಲನೆಗಾಗಿ ಹಾಜರುಪಡಿಸತಕ್ಕದ್ದು.
6. ನೋಂದಣಿ ಕಾರ್ಡ್‌ಗಳನ್ನು ಸ್ಫರ್ಧೆಗಳಲ್ಲಿ ಭಾವಹಿಸಲು ಹಾಗೂ ಊಟ/ ವಸತಿ/ ಟ್ರಾಕ್ ಸೂಟ್/ ಕ್ಯಾಪ್ ಪಡೆಯುವ ಸಂದರ್ಭದಲ್ಲಿ ತೋರಿಸತಕ್ಕದ್ದು.
7. ಯಾವ ರಾಜ್ಯ ಸರ್ಕಾರಿ ನೌಕರರು ಕ್ರೀಡಾಕೂಟದಲ್ಲಿ ಆಯ್ಕೆಯಾಗಿರುತ್ತಾರೋ ಅವರೇ ಭಾಗವಹಿಸಿ ಮೇಲ್ಕಂಡ ಸೌಲಭ್ಯಗಳನ್ನು ಪಡೆಯುವುದು. ಬೇರೊಬ್ಬರಿಗೆ ಸೌಲಭ್ಯಗಳನ್ನು ನೀಡಲಾಗುವುದಿಲ್ಲ.ಸರ್ಕಾರಿ ನೌಕರರುಗಳು ಈ ಕ್ರೀಡಾಕೂಟದಲ್ಲಿ ಕ್ರೀಡಾಸ್ಫೂರ್ತಿಯಿಂದ ಭಾಗವಹಿಸಿ ಸಂಯಮದಿoದ ವರ್ತಿಸಿ ಕ್ರೀಡಾಕೂಟಗಳ ಯಶಸ್ವಿಗೆ ಸಹಕರಿಸಲು ಕೋರಿದೆ.
ಹೆಚ್ಚಿನ ಮಾಹಿತಿಗಾಗಿ ಬೆಳಿಗ್ಗೆ 10.30 ರಿಂದ ಸಂಜೆ 6.00ವರೆಗೆ ಸಂಪರ್ಕಿಸಿ 080 22354784/83. 9448617400
"ksgeanews" and "ksgea"
.png)
Comments
Post a Comment